ಅಗ್ನಿರಾಜ

ಅಗ್ನಿರಾಜ:
ಬೆಂಕಿ ನಿಲುವಂಗಿ ತೊಟ್ಟುಕೊಂಡು ಬುವಿಯಿಂದ ಬಂದ ಜೀವ
ಸಪ್ತಸ್ವರ್‍ಗಗಳ ಸುಪ್ತ ಮೌನವನು ದಾಟಿಕೊಂಡು ಯಾವ?
ನೀನು ಏನು ಅಧ್ಯಾತ್ಮದೌರಸನೊ? ಅಭವ ಸ್ವಯಂಭವನು.
ಪರಂಧಾಮದಾ ಅತಿಥಿಯೇನು? ಪೌರಾಣ ಕಾಲದವನು.

ಮನುಕುಲ ದೂತ:
ಮಾನವ್ಯಕುಲದ ಹರಿಕಾರ ನಾನು, ಆಂತರ್‍ಯದಾತ್ಮಸಾನು;
ಇರುಳನ್ನು ಕೊಡಹಿ ಸಾವನ್ನೆ ತಡೆದ ಪ್ರಪ್ರಥಮ ಪ್ರಮಥ ನಾನು;
ಅಮೃತಬಿಂಬ ಪ್ರತಿಬಿಂಬಿಸಿರುವ ಸೌಂದರ್‍ಯಲಕ್ಷ್ಮಿಸೂನು.
ಅಮರ ಜ್ಯೋತಿ ಮೃಗವೇಧಕಾಗಿ ಬಂದಂಥ ವ್ಯಾಧಶಿವನು.

ಅಗ್ನಿ ರಾಜ:
ತನ್ನ ಶಕ್ತಿಯಲಿ ನಿನ್ನ ಸುತ್ತಿರುವುದಾವ ಬೆಂಕಿ ಉರಿಯು?
ಪಾಲಿಸುತ್ತಿರೆಯು ಬರ್‍ಚಿ ನಾಲಗೆಯ ಚಾಚಿ ಕಾಯುತಿರೆಯು
ಸನಾತನದ ಸತ್ಕಾಲದಲ್ಲಿ ಸಂಚರಿಸುತ್ತಿಲ್ಲಿ ಬಂದೆ
ಕಲ್ಪನಾತೀತವಾದ ನವಕಿರಣದೊಂದು ಅಂಶವೆಂದೆ?

ಮನುಕುಲ ದೂತ:
ನವೋನವದ ಜಾಗೃತಿಯಲೆದ್ದ ಜೀವಾಗ್ನಿ ತೋಚುತಿಹುದು;
ಮರಣ ಸೀಳಿ ಉದ್ಭವಿಸಿ ಮೇಲೆ ಶಾಶ್ವತಕೆ ಚಾಚುತಿಹುದು;
ಯಜ್ಞ ಪಕ್ಷಿ ಗುರಿಯತ್ತ ಹಾರಿ ಶಿಖೆ ಏರಿ ಹರಿಯುತಿಹುದು;
ಮಾನವ್ಯದಲ್ಲಿ ಮಲಗಿದ್ದು ಎದ್ದ ದೇವತ್ವ ಉರಿಯುತಿಹುದು.

ಅಗ್ನಿರಾಜ:
ಭಂಗುರದ ಹಂಗು ಹರಕೊಂಡು ಬಂದೆ, ಓ ಮಗುವೆ ಏನೋ ಬೇಕೊ?
ಮುಕ್ತನಾಗಿ ಸಾವಿರದ ಸಯ್ತಿನಲಿ ಗುಮ್ಮನಿಹುದೆ? ಸಾಕೋ.
ಏನು ಬ್ರಹ್ಮ ಸಂಮುಖಕೆ ಸಾಕ್ಷಿಯಾಗಿರುವೆ ಎನುವೆ ನೀನು
ಅಸ್ಪರ್‍ಶ ಯೋಗ ನಿರ್‍ವಾಣದಲ್ಲಿ ಲಯವಾಗಬೇಕು ಏನು?

ಮನುಕುಲ ದೂತ:
ಪಾತಾಳಖಾತದಜ್ಞಾನದಲ್ಲು ಹೊತ್ತಿರಲಿ ದಿವ್ಯದೀಪ್ತಿ.
ನರಕಯಾತನೆಯ ಜೀವದಲ್ಲಿ ತಾನಿರಲಿ ದೇವಶಕ್ತಿ.
ಮೂರುಕಾಲಕೂ ಮೀರಿ ದುಃಖಿಸದ ಸುಖವು ಭೂಮಿಗೆಂದೆ
ಅಕ್ಷುಬ್ಧವಾದ ಹದಗೆಡದ ಶಾಂತಿ ಮಾನವಗೆ ಬೇಡಬಂದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಪ್ಪರಿಗೆ
Next post ವಾಗ್ದೇವಿ – ೨೯

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

cheap jordans|wholesale air max|wholesale jordans|wholesale jewelry|wholesale jerseys